KannadaNaaduNudi
Tuesday, 3 March 2015
Wednesday, 8 October 2014
Thursday, 3 October 2013
Tuesday, 6 November 2012
Be proud of being an KANNADIGA
|
Namma Shankarnag - Great Director of India, Hemmeya Kannadiga
ಹೆಸರಿನಲ್ಲಿಯೇ ಒಂದು ವೇಗ, ಹೊಸ ಆಯಾಮ, ಒಂದು ಸಂಚಲನ, ಭಿನ್ನ ಹೆಜ್ಜೆ. ರಂಗಭೂಮಿ, ಚಿತ್ರರಂಗ, ಕಿರುತೆರೆ, ಇನ್ನಿತರ ಸೃಜನಶೀಲ ಪ್ರಕಾರಗಳಲ್ಲಿ ತನ್ನದೇ ಹೆಜ್ಜೆ ಮೂಡಿಸಿದ ಶಂಕರ್ ನಾಗ್, ಇಪ್ಪತ್ತು ವರುಷಗಳ ನಂತರವೂ ಪದೇ ಪದೇ ನೆನಪಾಗುತ್ತಾರೆ. ಸಮಕಾಲೀನ ಆಲೋಚನೆಗಳಿಂದಲೇ ಎಲ್ಲರಿಗೂ ಬೇಕಾದವನಾಗಿ, ಎಲ್ಲರಿಗೂ ಮಾದರಿಯಾಗಿ ಶಂಕರ್ ನಮ್ಮ ಜೊತೆ ಜೊತೆಗೆ ಬೆಳೆದು ಬರುತ್ತಿರುತ್ತಾರೆ. ಮಾಲ್ಗುಡಿ ಡೇಸ್ ನಂತಹ ಧಾರಾವಾಹಿಗಳ ನಿರ್ಮಾಣಕ್ಕಾಗಲಿ, ಒಂದಾನೊಂದು ಕಾಲದಲ್ಲಿ ಚಿತ್ರದ ನಟನೆಯಿರಲಿ, ಮಿಂಚಿನ ಓಟವಾಗಲಿ ಅಥವಾ ಗೀತಾದಲ್ಲಿನ ಕುಣಿತಕ್ಕಾಗಲಿ ನಮ್ಮ ಶಂಕರ್ ನಾಗ್ ನಮ್ಮ ಶಂಕರ್ ನಾಗ್ ಆಗಿಯೇ ಉಳಿಯುತ್ತಾರೆ. ಇನ್ನೆಷ್ಟೇ ಕಾಲವಾಗಲಿ, ಯಾವ ಹೊಸ ಅಲೆಯೇ ಬರಲಿ ರಸ್ತೆಯ ಆಟೋಗಳ ಮೇಲೆ, ಸ್ಟಿಕ್ಕರುಗಳಲ್ಲಿ, ಡ್ರೈವರುಗಳ ಮನಸ್ಸುಗಳಲ್ಲಿ, ಅಸಂಖ್ಯ ಅಭಿಮಾನಿಗಳ ನೆನಪುಗಳಲ್ಲಿ ಶಂಕರ್ ಬೆರೆತಿರುತ್ತಾರೆ. ಶಂಕರನಾಗ್ ಅವರು ನಂದಿ ಬೆಟ್ಟಕ್ಕೆ ರೋಪ್ ವೇ, ಬೆಂಗಳೂರಿಗೆ ಮೆಟ್ರೋ ರೈಲು, ರಂಗಮಂದಿರ ಇವೆಲ್ಲಕ್ಕೂ ನಕ್ಷೆ ತಯಾರಿಸಿ ಸರ್ಕಾರದ ಮುಂದೆ ಇಟ್ಟಿದ್ದು ಇಡೀ ಕನ್ನಡ ನಾಡೇ ಬಲ್ಲ ಸಂಗತಿ.ಕನ್ನಡ ಚಿತ್ರರಂಗ ಕಂಡ ಒಬ್ಬ ಅದ್ಭುತ ನಟ, ಅವರ ಸೇವೆ ಅತ್ಯಲ್ಪ ಸಮಯವಾದರೂ ಮರೆಯಲಾಗದ ನೆನಪು ಬಿಟ್ಟಿದ್ದಾರೆ.ಕನ್ನಡ ನಾಡು ಶಂಕರನಂತಹ ಸುಂದರ ಕನಸಿಗರಿಲ್ಲದೆ ಸೊರಗುತ್ತಿರಬಹುದೆಂಬ ಅನಿಸಿಕೆಯನ್ನು ನಿರಂತರವಾಗಿರಿಸಿದೆ. ಶಂಕರನಂತವರು ಹೆಚ್ಚು ಹೆಚ್ಚಾಗಿ ಈ ನಾಡಿನಲ್ಲುದಯಿಸಲಿ. NO ONE HAD A BETTER VISION THAN HIM IN DIRECTING, THE REVOLUTIONIST UNMATCHABLE!!! Tribute to Shankarnag
About Mysore
ಮೈಸೂರು ಕರ್ನಾಟಕ ರಾಜ್ಯದಲ್ಲಿರುವ ನಗರ. ಮೈಸೂರು ಅದೇ ಹೆಸರಿನ ಜಿಲ್ಲೆಯ ಆಡಳಿತ ಕೇಂದ್ರ, ಮತ್ತು ಹಿಂದಿನ ಮೈಸೂರು ಸಂಸ್ಥಾನದ ಹಳೆಯ ರಾಜಧಾನಿ. ಮೈಸೂರನ್ನು 'ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ' ಎಂದು ಕರೆಯಲಾಗಿದೆ. ಇಲ್ಲಿ ಅನೇಕ ಅರಮನೆಗಳಿರುವುದರಿಂದ ಮೈಸೂರನ್ನು ಕೆಲವೊಮ್ಮೆ ಅರಮನೆಗಳ ನಗರ ಎಂದೂ ಕರೆಯಾಲಾಗುತ್ತದೆ. ಕರ್ನಾಟಕ ರಾಜ್ಯದ ಎರಡನೇ ಅತಿ ದೊಡ್ಡ ನಗರವೆಂಬ ಪ್ರಕ್ಯಾತಿಯನ್ನೂ ಪಡೆದಿದೆ.
ಮೈಸೂರು ಕರ್ನಾಟಕದ ಪ್ರಸಿದ್ಧ ಪ್ರವಾಸಿ ಆಕರ್ಷಣೆಗಳಲ್ಲಿ ಹಲವನ್ನು ಒಳಗೊಂಡಿದೆ. ಇಲ್ಲಿನ ಮುಖ್ಯ ಆಕರ್ಷಣೆಗಳಲ್ಲಿ ಕೆಲವೆಂದರೆ ಮೈಸೂರು ಅರಮನೆ, ಶ್ರೀ ಚಾಮರಾಜೇಂದ್ರ ಮೃಗಾಲಯ, ಚಾಮುಂಡಿ ಬೆಟ್ಟ, ಕಾರಂಜಿ ಕೆರೆ, ಕುಕ್ಕರಹಳ್ಳಿ ಕೆರೆ ಇತ್ಯಾದಿ.ರೀಜನಲ್ ಮ್ಯೂಜಿಯ್ಂ ಆಫ್ ನ್ಯಾಚುರಲ್ ಹಿಸ್ಟರಿ,ಜಗನ್ಮೊಹನ ಅರಮನೆ. ಮೈಸೂರಿಗೆ ಸಮೀಪದಲ್ಲಿರುವ ಆಕರ್ಷಣೆಗಳಲ್ಲಿ ಕೆಲವು ಶ್ರೀರಂಗಪಟ್ಟಣ, ಕೃಷ್ಣರಾಜಸಾಗರ, ರಂಗನತಿಟ್ಟು, ಬಂಡಿಪುರ,ತಲಕಾಡು,ಮುಡುಕುತೊರೆ ತಿರುಮಕೂಡಲು ನರಸೀಪುರ ಇತ್ಯಾದಿ.
ಮೈಸೂರು ಎಂಬ ಹೆಸರು ಆಂಗ್ಲ ಭಾಷೆಯಿಂದ ರೂಪಾಂತರಗೊಂಡಿದೆ ಇದರ ಮೂಲ ಹೆಸರು ಮಹಿಷಪುರಿ ಇದರ ಅರ್ಥ ಮಹಿಷನ ವಾಸಸ್ಥಾನ ಎಂದು ಕನ್ನಡದಲ್ಲಿ ಹೇಳಬಹುದು. ಮಹಿಷ ಎಂದರೆ ಮಹಿಷಾಸುರ ಎಂಬ ಪುರಾಣದಲ್ಲಿ ಬರುವ ಒಬ್ಬ ರಾಕ್ಷಸ ಈತ ಮಾನವ ಮತ್ತು ಎಮ್ಮೆ ಎರಡೂ ರೂಪದಲ್ಲಿ ಇರುವ ವ್ಯಕ್ತಿ . ಹಿಂದೂ ಪುರಾಣದ ಪ್ರಕಾರ ಈ ಪ್ರದೇಶವನ್ನು ರಾಕ್ಷಸ ಮಹಿಶಾಸುರನು ಆಳುತ್ತಿದ್ದ , ಆ ರಾಕ್ಷಸ ತಾಯಿ ಚಾಮುಂಡೇಶ್ವರಿಯಿಂದ ಹತನಾಗುತ್ತಾನೆ ಬಳಿಕ ಚಾಮುಂಡೇಶ್ವರಿಯು ಅದೇ ಬೆಟ್ಟದ ಮೇಲೆ ನೆಲೆಗೊಳ್ಳುತ್ತಾಳೆ. ನಂತರ ಮಹಿಷೂರು ಮಹಿಸೂರಾಗಿ ತದನಂತರ ಕೊನೆಯದಾಗಿ ಮೈಸೂರು ಎಂದು ಬದಲಾವಣೆಯಾಗಿದೆ. ಡಿಸೆಂಬರ್ 2005 ರಲ್ಲಿ, ಕರ್ನಾಟಕ ಸರ್ಕಾರ ಮೈಸೂರು ನಗರದ ಇಂಗ್ಲೀಷ್ ಹೆಸರನ್ನು ಬದಲಾಯಿಸಲು ಇಚ್ಛೆಯನ್ನು ಪ್ರಕಟಿಸಿತು ಭಾರತ ಸರ್ಕಾರವು ಇದನ್ನು ಅಂಗೀಕರಿಸಿದೆ, ಆದರೆ ಹೆಸರನ್ನು ಸೇರಿಸಲು ಅಗತ್ಯ ವಿಧಿವಿಧಾನಗಳನ್ನು ಇನ್ನೂ ಪೂರ್ಣಗೊಳಿಸಿಲ್ಲ.
Subscribe to:
Comments (Atom)


