೪ ಅಡಿ ಗರಿಷ್ಠ ಪ್ರಮಾಣದಲ್ಲಿ ನೀರು ಸಂಗ್ರಹಿಸಲು ೧೯೨೪ರಲ್ಲಿ ಒಪ್ಪಂದ ಮಾಡಿಕೊಳ್ಳಲಾಯಿತು. ಗ್ರಾನೈಟ್‌ಕಲ್ಲು ಮತ್ತು ಸುರ್ಕಿ ಗಾರೆಯಿಂದ ಈ ಜಲಾಶಯ ನಿರ್ಮಿಸಲಾಯಿತು. ನೆರೆಬಂದಾಗ ಜಲಾಶಯಕ್ಕೆ ಅಪಾಯವಾಗದಂತೆ ತೂಬುಗಳನ್ನು ನಿರ್ಮಿಸಲಾಯಿತು. ಜಲಾಶಯದ ಕ್ರೆಸ್ಟ್ ಗೇಟ್‌ಗಳನ್ನು ತೆರೆದಾಗ ಬಿಳಿಯ ಹಾಲು ನೊರೆಯಂತೆ ಭೋರ್ಗರೆಯುತ್ತಾ ಹೊಳೆಗೆ ಹರಿಯುವ ನೀರಿನ ರಮಣೀಯತೆಯನ್ನು ನೋಡುವುದೇ ಒಂದು ಸೊಗಸು. ವಿಶ್ವೇಶ್ವರಯ್ಯನವರ ಈ ಮಹತ್ಕಾರ್ಯಕ್ಕೆ ಮತ್ತಷ್ಟು ಪುಷ್ಟಿ ಸಿಕ್ಕಿದ್ದು ಸರ್ ಮಿರ್ಜಾ ಇಸ್ಮಾಯಿಲ್ ಅವರು ದಿವಾನರಾದಾಗ. ಅವರು ಕಾಶ್ಮೀರದ ಶಾಲಿಮಾನ್ ತೋಟದ ಮಾದರಿಯಲ್ಲೇ ಎರಡೂ ದಡದಲ್ಲಿ ಬೃಂದಾವನ ಉದ್ಯಾನ ನಿರ್ಮಿಸಿದರು. ಇಲ್ಲಿ ಜಲಧಾರೆಗಳನ್ನು, ಚಿಲುಮೆಗಳನ್ನು ನಿರ್ಮಿಸಲಾಯಿತು. ಸಂಗೀತ ಕಾರಂಜಿ ಇಲ್ಲಿನ ಮತ್ತೊಂದು ಆಕರ್ಷಣೆ. ಕತ್ತಲಾವರಿಸುತ್ತಿದ್ದಂತೆ ಬೃಂದಾವನದಲ್ಲಿ ಬೆಳಗುವ ದೀಪಗಳನ್ನು ಮೇಲ್ಭಾಗದಲ್ಲಿ ನಿಂತು ಆನಂದಿಸುವುದೇ ಒಂದು ಸೊಗಸು.
ಮತ್ತೊಂದು ಮಾಹಿತಿ: ಕೆ.ಆರ್.ಎಸ್. ಜಲಾಶಯ ನಿರ್ಮಾಣಕ್ಕೆ ಮುನ್ನ ಇಲ್ಲಿ ಕನ್ನಂಬಾಡಿ ಎಂಬ ಊರಿತ್ತು. ಆ ಊರಲ್ಲಿ ೬೦೦ ವರ್ಷಗಳಷ್ಟು ಹಳೆಯದಾದ ಚೋಳರ ಕಾಲದ ವೇಣುಗೋಪಾಲ ಸ್ವಾಮಿ ದೇವಾಲಯವೂ ಇತ್ತು. ಈಗ ಕಾವೇರಿ ಹಿನ್ನೀರಿನಲ್ಲಿ ಇದು ಮುಳುಗಿ ಹೋಗಿದೆ. ಸುಂದರ ಶಿಲ್ಪಕಲಾ ಕೆತ್ತನೆಯ ದೊಡ್ಡ ದೊಡ್ಡ ಕಂಬಗಳು, ಗೋಪುರಗಳುಳ್ಳ ಈ ಶಿಲಾ ದೇಗುಲ ೨೦ ವರ್ಷಗಳ ಬಳಿಕ ೨೦೦೦ನೇ ಇಸವಿ ಮೇ ೨೪ರಂದು ಸಂಪೂರ್ಣ ಗೋಚರಿಸಿತ್ತು. ಮತ್ತೆ ಎರಡು ವರ್ಷದ ಬಳಿಕ ಮತ್ತೆ ಭಾಗಶಃ ಗೋಚರಿಸಿತ್ತು. ಈ ದೇಗುಲದ ಸುತ್ತ ಎತ್ತರವಾದ ಆವರಣಗೋಡೆ ಇದೆ. ಹಿಂದೆ ಇಲ್ಲಿ ಊರಿತ್ತು ಎಂಬುದಕ್ಕೆ ಸಾಕ್ಷಿಯಾಗಿ ಬಿಡಾರಗಳು, ದನದ ಕೊಟ್ಟಿಗೆಗಳು, ಸುಂದರ ಪ್ರಾಕಾರ ಇದೆ. ತ್ರಿಕೂಟ, ಸುಖನಾಸಿ, ಮಂಟಪ, ಮಹಾಮಂಟಪಗಳಿಂದ ಕೂಡಿದ ಈ ದೇಗುಲ ೧೮ ಕಂಬಗಳಿಂದ ಕೂಡಿದ್ದು ಸುಭದ್ರವಾಗಿತ್ತು. ಈಗ ಇಡೀ ದೇಗುಲವನ್ನು ಸ್ಥಳಾಂತರ ಮಾಡಲಾಗದೆ.

No comments:
Post a Comment